ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನವನ್ನು ಆಧುನಿಕ ಮಾಧ್ಯಮಗಳಲ್ಲಿ ಅಳವಡಿಸಿ : ಡಾ. ವಸಂತ ಕುಮಾರ್‌ ಪೆರ್ಲ

ಲೇಖಕರು : ಪ್ರಜಾವಾಣಿ
ಶುಕ್ರವಾರ, ಒಕ್ಟೋಬರ್ 30 , 2015
ಒಕ್ಟೋಬರ್ 30, 2015

ಯಕ್ಷಗಾನವನ್ನು ಆಧುನಿಕ ಮಾಧ್ಯಮಗಳಲ್ಲಿ ಅಳವಡಿಸಿ : ಡಾ. ವಸಂತ ಕುಮಾರ್‌ ಪೆರ್ಲ

ಬೆಳ್ತಂಗಡಿ : ಕಲಾ ಪ್ರಕಾರವು ಅವಶ್ಯಕತೆಗೆ ಅನುಗುಣವಾಗಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆಯನ್ನು ಆಧುನಿಕ ಮಾಧ್ಯಮಗಳಲ್ಲಿ ಅಳವಡಿ ಸುವ ಅನಿವಾರ್ಯತೆ ಇದೆ’ ಎಂದು ಮಂಗಳೂರು ಆಕಾಶವಾಣಿಯ ಸಹಾ ಯಕ ನಿರ್ದೇಶಕ ಡಾ. ವಸಂತ ಕುಮಾರ್‌ ಪೆರ್ಲ ಹೇಳಿದರು.

ಆಕಾಶವಾಣಿ ಮಂಗಳೂರು, ಉಡುಪಿ ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರ ಮದಲ್ಲಿ ಯಕ್ಷಗಾನ ಅರ್ಥಧಾರಿ ಡಾ. ರಾಘವ ನಂಬಿಯಾರ್‌ ಅವರ ‘ರಾನಂ ಪ್ರಸಂಗ ಸಂಪುಟ’ ಯಕ್ಷಗಾನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಂದು ಎಲ್ಲ ಕಲೆ ಗಳೂ ಸಂದಿಗ್ಧ ಘಟ್ಟದಲ್ಲಿವೆ. ಆದ್ದ ರಿಂದ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮಗಳ ಸಹಾಯ ಪಡೆಯುವ ಅಗತ್ಯವಿದೆ. ಈ ಬಗ್ಗೆ ಕಲಾ ಪ್ರಕಾರದಲ್ಲಿರುವವರು ಚಿಂತಿಸಬೇಕು ಎಂದು ಅವರು ಹೇಳಿದರು.

ಆಕಾಶವಾಣಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಂಗ ಳೂರು ಸೇರಿದಂತೆ ಒಟ್ಟು 32 ಲಕ್ಷ ಕೇಳುಗರಿದ್ದಾರೆ. ಹಾಗಾಗಿ ಆಕಾಶವಾಣಿ ಯಲ್ಲಿ ಯಕ್ಷಗಾನ ತುಂಬಾ ಯಶಸ್ವಿ ಕಲಾಪ್ರಕಾರವಾಗಿ ಮೂಡಿಬಂದಿದೆ ಎಂದರು.

ಕೃತಿ ಪರಿಚಯಿಸಿ ಮಾತನಾಡಿದ ಡಾ. ಪಾದೆಕಲ್ಲು ವಿಷ್ಣುಭಟ್ಟ, ‘ಯಕ್ಷಗಾನ ಕಾಲಮಿತಿಗೆ ಒಳಗಾಗಬೇಕು. ಸಂಕುಚಿತ ಗೊಳ್ಳಬೇಕೆಂಬ ಮಾತು ಅಪಾಯವನ್ನು ಉಂಟು ಮಾಡಬಹುದು. ಇದು ಯಕ್ಷಗಾದ ಬಗ್ಗೆ ಚಿಂತನೆ ಹಾಗೂ ಕೆಲಸ ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಯಕ್ಷಗಾನ ಪ್ರಸಂಗ ಗಳನ್ನು ಗ್ರಂಥದ ರೂಪದಲ್ಲಿ ದಾಖಲು ಮಾಡುವ ಕೆಲಸ ಅಪಾಯ ವನ್ನು ಸೂಚಿಸುವುದಿಲ್ಲ. ಅದು ನಮ್ಮ ಶಕ್ತಿ, ಸಾಮರ್ಥ್ಯ ಹಾಗೂ ಕಲೆಯ ವೈಶಿಷ್ಟ್ಯತೆ ಯನ್ನು ತಿಳಿಸುವ ಪ್ರಯತ್ನ’ ಎಂದರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್‌. ಶಾಂತರಾಮ್‌, ಡಾ. ರಾಘವ ನಂಬಿಯಾರ್‌ ಉಪಸ್ಥಿತರಿದ್ದರು. ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಹೆರಂಜೆ ಕೃಷ್ಣ ಭಟ್‌ ಸ್ವಾಗತಿಸಿದರು, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸದಾನಂದ ಹೊಳ್ಳ ನಿರೂಪಿಸಿದರು.

ಕೃಪೆ : prajavani

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ